Chào các bạn! Vì nhiều lý do từ nay Truyen2U chính thức đổi tên là Truyen247.Pro. Mong các bạn tiếp tục ủng hộ truy cập tên miền mới này nhé! Mãi yêu... ♥

ಭಾಗ ೬ - ??

ರೇಷ್ಮಾ ಮರುದಿನ ಮುಂಜಾನೆ ಎಂದಿನಂತೆಯೇ ತನ್ನ ಕೆಲಸ ಕಾರ್ಯಗಳನ್ನು ಮುಗಿಸಿ ಕಾಲೇಜಿಗೆ ಹೊರಟಳು. ಅವಳೊಂದಿಗೆ ರೀನಾ ಕೂಡ ಹೊರಟಳು.

ತಂದೆಯ ಪಿಸ್ತೂಲನ್ನು ತೆಗೆದ ಸ್ಥಳದಲ್ಲೇ ಇಟ್ಟಿದ್ದರಿಂದ ಜೆರಾಲ್ಡ್ ಗೆ ಏನೂ ಸಂಶಯ ಬಂದಿರಲಿಲ್ಲ. ಆದರೆ ನಡೆದ ಘಟನೆಯನ್ನು ಚಾಂದಿನಿಯು ಸವಿವರವಾಗಿ ಜೆರಾಲ್ಡ್ ಗೆ ತಿಳಿಸಿದಳು . ಇದನ್ನು ತಿಳಿದ ಜೆರಾಲ್ಡ್ ಕೆಂಡಾಮಂಡಲವಾದನು. ವಿಷಯ ತಿಳಿದ ಜೆರಾಲ್ಡ್ ಮಗಳಿಗೆ ಸರಿಯಾದ ಪಾಠ ಕಲಿಸಬೇಕೆಂದು ಕೊಂಡನು. ಆದರೆ ತನ್ನ ಕೋಪವನ್ನು ಹಿಡಿತದಲ್ಲಿಟ್ಟು ನಯವಾಗಿಯೇ ಚಾಂದಿನಿಯನ್ನು ಮಾತನಾಡಿಸಿದನು.ಆತನೊಂದಿಗೆ ಮಾತನಾಡುತ್ತಿರುವಾಗಲೇ ಚಾಂದಿನಿಗೆ ಯಾವುದೊ ಒಂದು ಫೋನ್ ಕರೆ ಬಂದಿತು, ಫೋನ್ ನಂಬರ್ ನೋಡಿದ ಕೂಡಲೇ ಆಕೆ ಬೆವರತೊಡಗಿದಳು. ಇದು ಆಕೆಗೆ ಬರುತ್ತಿರುವ ಮೂರನೇ ಕರೆ. ಅದ್ಯಾವುದೋ ಒಂದು ಒರಟು ಸ್ವರ , ತನಗೆ ೫೦ ಕೋಟಿ ಕೊಡಬೇಕು ಇಲ್ಲವಾದರೆ ನಿನ್ನನ್ನು ಅಪಹರಿಸಿ ಕೊಂದು ಬಿಡುವೆ ಎಂದು ಹೇಳುತಿತ್ತು. ಆಕೆಯ ಭಾವನೆಯಲ್ಲಿ ಬದಲಾವಣೆಯನ್ನು ಕಂಡ ಜೆರಾಲ್ಡ್ ಆಕೆಯನ್ನು ವಿಚಾರಿಸಲು ತನಗೆ ಬರುವ ಅಪರಿಚಿತ ಕರೆಯ ಬಗ್ಗೆ ವಿಸ್ತರಿಸಿ ತಿಳಿಸಿದಳು. ಇದನ್ನು ತಿಳಿದ ಕೂಡಲೇ ಪೊಲೀಸ್ ಕಂಪ್ಲೇಂಟ್ ಮಾಡಬೇಕೆಂದು ಮುಂದಾದ ಜೆರಾಲ್ಡ್ನನ್ನು ತಡೆಯುತ್ತಾ , ಏನಾದರೂ ಉಪಾಯ ಮಾಡಿ ಬೆದರಿಸುವಾತನನ್ನು ನಾವೇ ಪೊಲೀಸರಿಗೆ ಒಪ್ಪಿಸುವ ಎಂದು ಹೇಳಿದಳು. ಈವಾಗಲೇ ಪೊಲೀಸರಿಗೆ ತಿಳಿಸಿದರೆ ನಮ್ಮ ದೈನಂದಿನ ಕೆಲಸಗಳಿಗೆ ಅಡ್ಡಿಯಾಗಿ , ದಿನವಿಡೀ ಪೊಲೀಸ್ ಸ್ಟೇಷನ್ ಸುತ್ತ ತಿರುಗಾಡಬೇಕಾದ ಸಂದರ್ಭ ಬರಬಹುದೆಂದು ಹೇಳಿ ಇಬ್ಬರೂ ಪ್ರೇಮದಾಟವನ್ನು ಶುರು ಮಾಡಿದರು.

ಸ್ಫುರದ್ರೂಪಿಯಾದ ಆತನ ವಯಸ್ಸು ೪೦ಆದರೂ   ನೋಡಲು ೨೫ ರ ಹರೆಯದ ಯುವಕನಂತಿದ್ದ. ಆತ ಹೊಸದಾಗಿ ನೇಮಕಗೊಂಡ ಉಪನ್ಯಾಸಕ. ಬರ್ನಾರ್ಡ್ ಎಂಬುದು ಆತನ ಹೆಸರು. ಈಕೆಗೆ ಇನ್ನೂ ೨೦ ದಾಟಿರಲಿಲ್ಲ, ಆದರೆ ಮೊದಲ ನೋಟದಲ್ಲೇ ಆತನ ಮೇಲೆ ಪ್ರೇಮಾಂಕುರವಾಗಿತ್ತು. ಕಾಲೇಜಿಗೇ ಉಪನ್ಯಾಸಕನಾಗಿ ನೇಮಕಗೊಂಡ ಮೊದಲ ದಿನವೇ ಆತನನ್ನು ನೋಡಿದುದೇ ತಡ, ಮನದಲ್ಲಿ ಏನೋ ತುಡಿತ , ನೂರಾರು ಆಸೆಗಳು , ಕಳವಳ , ಮಿಶ್ರಿತ ಭಾವನೆಗಳು ಹೊರಹೊಮ್ಮಿದವು.

ಆತನ ಮೊದಲ ದಿನದ ಮೊದಲ ಉಪನ್ಯಾಸ ಈಕೆಯ ತರಗತಿಯಲ್ಲೇ ನಿಗದಿಯಾಗಿತ್ತು. ಉಪನ್ಯಾಸಕ್ಕೆ ಕಿವಿಗೊಡದೆ ಆತನ ತುಟಿಗಳನ್ನೇ ನೋಡುತ್ತಾ ಏನೇನೋ ಯೋಚನೆಯಲ್ಲಿ ಮುಳುಗತೊಡಗಿದಳು ರೇಷ್ಮಾ.ಆತನ ಬಾಹುಬಂಧನದಲ್ಲಿ ಬಂಧಿಯಾಗಿ , ಆತನ ತುಟಿಗಳಿಗೆ ತನ್ನ ತುಟಿಯನ್ನೊತ್ತಿ ಗಾಢವಾಗಿ ಚುಂಬಿಸಬೇಕೆಂದುಕೊಳ್ಳುವಷ್ಟರಲ್ಲಿ ಕಾಲೇಜಿನ ರಿಂಗ್ ರಿಂಗಣಿಸಿತು. ಇದರಿಂದಾಗಿ ಹಗಲು ಕನಸು ಕಾಣುತಿದ್ದ ಕನ್ಯೆ ನೈಜ ಲೋಕಕ್ಕೆ ಬರಬೇಕಾಯಿತು.

ಆತನೊಂದಿಗೆ ಮಾತನಾಡಬೇಕೆಂದು ರೇಷ್ಮಾಳ ಮನಸ್ಸು ತಡವರಿಸುತ್ತಿತ್ತು. ಆದರೆ ಯಾವುದೇ ಅವಕಾಶವಿರಲಿಲ್ಲ. ಆದರೆ ಯಾವುದೋ ಒಂದು ಕಾರಣ ಮಾಡಿ ಹೊಸ ಉಪನ್ಯಾಸಕರನ್ನು ಭೇಟಿಯಾದಳು. ಆಕೆಯೊಂದಿಗೆ ಬಹಳಷ್ಟು ಮಾತನ್ನಾಡಿದ ಉಪನ್ಯಾಸಕರು ಮಾತು ಮುಗಿಸಿ ತನ್ನ ಮುಂದಿನ ತರಗತಿಯ ಉಪನ್ಯಾಸದ ಬಗ್ಗೆ ಯೋಚಿಸಲು ಶುರು ಮಾಡಿದರು. ತನ್ನಲ್ಲಿ ಪ್ರೀತಿ ಉಕ್ಕಿ ಹರಿಯುತಿದ್ದರಾದರು ಅದನ್ನು ವ್ಯಕ್ತಪಡಿಸುವ ಸ್ಥಿತಿಯಲ್ಲಿರಲಿಲ್ಲ. ತನ್ನ ಲೋಕದಲ್ಲೇ ವಿಹರಿಸಲು ಶುರು ಮಾಡಿದಳು. ಚಾಂದಿನಿಯ ಬಗ್ಗೆ ಮರೆತು ಚಂದದ ಹುಡುಗನ ಯೋಚನೆಯೇ ಇವಳಿಗೆ ಕಾಡುತಿತ್ತು. ದಿನಗಳುರುಳುತಿದ್ದಂತೆ ಪ್ರೀತಿ ಹಾಗು ಕಾಮವು ಉಕ್ಕಿ ಹರಿಯಲಾರಂಭಿಸಿದವು. ಉಪನ್ಯಾಸಕನ ಜೊತೆಗೆ ಒಡನಾಟವು ಹೆಚ್ಚಾಗತೊಡಗಿತು, ಆದರೆ ಪ್ರೀತಿಯ ಬಗ್ಗೆ ಏನೂ ತಿಳಿಸಲಿಲ್ಲ.

ಉಪನ್ಯಾಸಕನೂ ತನ್ನನ್ನು ಪ್ರೀತಿ ಮಾಡುತ್ತಿದ್ದಾನೆಂದು ಅರಿತು ತನ್ನೊಳಗೆ ಖುಷಿ ಪಡುತ್ತಿದ್ದಳು. ಉಪನ್ಯಾಸಕರಿಗೆ ಮದುವೆಯಾಗಲಿಲ್ಲವೆಂಬುದು ಈಕೆಯ ಖುಷಿಯನ್ನು ಇಮ್ಮಡಿಗೊಳಿಸಿತ್ತು. ಆದರೆ ಇವಳ ಜೀವನದಲ್ಲಿ ಇಷ್ಟು ಬೇಗ ಬಿರುಗಾಳಿ ಎದ್ದು ಬರುತ್ತೆ ಎಂಬ ಪರಿಕಲ್ಪನೆಯೂ ಇವಳಿಗಿರಲಿಲ್ಲ . ಹೀಗಿರಲು ಒಂದು ದಿನ ಉಪನ್ಯಾಸಕರಿಗೆ ಸರ್ಪ್ರೈಸ್ ಕೊಡಬೇಕೆಂದೆನಿಸಿ ಆತನ ಕಾರನ್ನು ಹಿಮಬಾಲಿಸುತ್ತ ಆತನ ಹಿಂದೆಯೇ ಹೊರಟಳು.ತನ್ನ ಮನೆ ಸೇರಿದ ಉಪನ್ಯಾಸಕ ಯಾವುದೊ ಮಧ್ಯವಯಸ್ಸಿನ ಹೆಂಗಸನ್ನು ಆಲಂಗಿಸುವುದನ್ನು ಕಂಡ ರೇಷ್ಮಾಳಿಗೆ ಗರ ಬಡಿದಂತಾಯಿತು. ತನಗಿನ್ನೂ ಮದುವೆಯಾಗಿಲ್ಲ ಎಂದಿದ್ದ ಉಪನ್ಯಾಸಕನನ್ನು ಇನ್ನೊಬ್ಬ ಹೆಂಗಸಿನೊಂದಿಗೆ ಕಂಡೊಡನೆ ಕುಪಿತಗೊಂಡ ರೇಷ್ಮಾ ಅವರ ಮನೆಯ ಬಾಗಿಲನ್ನು ಜೋರಾಗಿ ಬಡಿಯಲಾರಂಭಿಸಿದಳು. ಮನೆಯಲ್ಲಿದ್ದ ಹೆಂಗಸು ಬಾಗಿಲು ತೆರೆದುದೇ ತಡ ರೇಷ್ಮಾ ಆಕೆಯ ಮೈಮೇಲೆ ಹೌ ಹಾರಿದಳು. ರೇಷ್ಮಾಳ ಪ್ರಶ್ನೆಯು ಒಂದೇ ಆಗಿತ್ತು ," ನೀನು ಆತನ ಹೆಂಡತಿಯೋ "ಎಂಬುದು. ಆದರೆ ಉತ್ತರ ಬರುವುದು ತಡವಾಗುತ್ತಲೇ ತಾಳ್ಮೆಯನ್ನು ಕಳೆದುಕೊಂಡ ರೇಷ್ಮಾ ಮೂಗುದಾರವಿಲ್ಲದ ಹೋರಿಯಂತಾದಳು. ಇದನ್ನು ನೋಡುತಿದ್ದ ಬರ್ನಾರ್ಡ್ ಏನಾಯಿತೆಂದು ಕೇಳಲು , ತಡಮಾಡದೆ ಅದೇ ಪ್ರಶ್ನೆಯನ್ನು ಪುನರುಚ್ಚರಿಸಿದಳು. ಬರ್ನಾರ್ಡ್ ಈಕೆ ತನ್ನ ಪತ್ನಿಯಲ್ಲ , ಆದರೆ ನನ್ನ ಭಾವಿ ಪತ್ನಿ ಎಂದು ಹೇಳುವಾಗಲೇ ರೇಷ್ಮಾ ತಲೆತಿರುಗಿ ಅಲ್ಲೇ ಬಿದ್ದು ಬಿಟ್ಟಳು.

ದಿನ ಉರುಳುತಿದ್ದಂತೆ ಚಾಂದಿನಿ ಹಾಗು ಜೆರಾಲ್ಡ್ನ ಪ್ರೀತಿ ದ್ವಿಗುಣವಾಗಿತ್ತು. ಪ್ರೀತಿಯ ಬೆಂಕಿಯಲ್ಲಿ ಬಿದ್ದ ರೇಷ್ಮಾ ಅದೊಂದು ದಿನ ಉಪನ್ಯಾಸಕನ ಪ್ರೇಯಸಿಯ ಮನೆಯತ್ತ ಧಾವಿಸಿಯೇ ಬಿಟ್ಟಳು. ಮನೆಯ ಬಾಗಿಲು ನಿಧಾನವಾಗಿ ಬಡಿದಳು. ಆ ಹೆಂಗಸು ಬಾಗಿಲು ತೆರೆದುದೇ ತಡ , ತನ್ನನ್ನು ದಯವಿಟ್ಟು ಕ್ಷಮಿಸಿ ಎಂದು ಹೇಳಿ ಗೊಳೋ ಎಂದು ಅಳುತ್ತ ಆಕೆಯ ಪಾದದೆಡೆಗೆ ಧೊಪ್ಪನೆ ಬಿದ್ದಳು. ಇದನ್ನು ನೋಡಿದ ಉಪನ್ಯಾಸಕನ ಪ್ರೇಯಸಿಗೆ ಬಹಳಷ್ಟು ನೋವಾಯಿತು. ರೇಷ್ಮಾಳನ್ನು ಎಬ್ಬಿಸುತ್ತ ಮನೆಯೊಳಗೇ ಕರೆದೊಯ್ದಳು. ಆದರೆ ತದನಂತರ ನಡೆದುದೇ ಬೇರೆ, ಎಲ್ಲವೂ ಪೂರ್ವ ಯೋಜಿತ. 

ಹೌದು , ಎಲ್ಲಾ ಪೂರ್ವ ಸಿದ್ಧತೆ ಮಾಡಿಯೇ ಹೊರಟಿದ್ದಳು. ಅದ್ಯಾವುದೂ ಸುಳಿವು ಸಿಗದಂತೆ ನೀಟಾಗಿ , ಉಪನ್ಯಾಸಕನ ಪ್ರೇಯಸಿಯ ಕೊಲೆಯಾಗಿತ್ತು. ಸಯನೈಡ್ ಎಂಬ ವಿಷ ಪದಾರ್ಥವನ್ನು ಆಕೆಯ ಬಾಯೊಳಗೆ ಇಟ್ಟೊಡನೆ ಪರ ಲೋಕ ಸೇರಿದ್ದಳು.ಪೊಲೀಸರಿಗೆ ಯಾವ ಸುಳಿವೂ ಸಿಗಲಿಲ್ಲ. ಆತ್ಮಹತ್ಯೆ ಎಂಬ ಪಟ್ಟವನ್ನು ಕಟ್ಟಿ ಪೊಲೀಸರು ಕೇಸ್ ಮುಚ್ಚಿದರು. ಆದರೆ ಬರ್ನಾರ್ಡ್ ಬಹಳಷ್ಟು ನೊಂದಿದ್ದನು, ರೇಷ್ಮಾಳ ಬಗ್ಗೆ ಆತನಿಗೆ ಒಂದಿನಿತೂ ಶಂಕೆ ಬಂದಿರಲಿಲ್ಲ.

ಜೀವ ಬೆದರಿಕೆಯ ಕರೆಗಳು ಇಲ್ಲದುದರಿಂದ ಚಾಂದಿನಿ ಹಾಗೂ ಜೆರಾಲ್ಡ್ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಆದರೆ ಹಠಾತ್ತನೆ ಚಾಂದಿನಿಗೆ ರೇಷ್ಮಾಳ ಕಡೆಯಿಂದ ಜೀವ ಬೆದರಿಕೆಯ ಕರೆಗಳು ಬರಲಾರಂಭಿಸಿತು. ಇದೆಲ್ಲವನ್ನು ಜೆರಾಲ್ಡ್ಗೆ ತಿಳಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಒಂದು ದಿನ ಫೋನಿನ ಲೌಡ್ ಸ್ಪೀಕರ್ ಆನ್ ಮಾಡಿ ರೇಷ್ಮಾಳ ಕರೆಯನ್ನು ಜೆರಾಲ್ಡ್ಗೆ ಕೇಳಿಸಿದಳು. ಇದನ್ನು ಗಂಭೀರವಾಗಿಯೇ ತೆಗೆದುಕೊಂಡ ಜೆರಾಲ್ಡ್ ಮಗಳಿಗೆ ತಿಳಿ ಹೇಳ ಬೇಕೆಂದು ಮನದಟ್ಟು ಮಾಡಿಕೊಂಡನು.

ಮನೆಗೆ ಬಂದೊಡನೆ ಮಗಳಿಗೆ ಭಾಷಣವನ್ನಿತ್ತನು. ಆದರೆ ಬಹಳಷ್ಟು ನೊಂದಿದ್ದ ರೇಷ್ಮಾ ಇದಾವುದನ್ನೂ ಲೆಕ್ಕಿಸದೆ ತನ್ನ ಮಲಗುವ ಕೊನೆಗೆ ಹೋಗಿ ಭಾವುಕಳಾಗಿ ಅಳತೊಡಗಿದಳು.

ಎರಡು ದಿನಗಳಾದರೂ ಮಗಳ ಸುಳಿವೇ ಇಲ್ಲ. ಹಸೀನಾ ತುಂಬಾ ಭಯಭೀತಳಾಗಿದ್ದಳು. ಅಕ್ಕನ ಬರುವಿಕೆಯನ್ನೇ ಕಾಯುತಿದ್ದ ತಂಗಿ ರೀನಾ ದುಃಖತಪ್ತಳಾಗಿದ್ದಳು.ರೇಷ್ಮಾ ಮನೆಗೆ ಬಾರದೆ ಬರೋಬ್ಬರಿ ೨ ದಿನಗಳಾಗಿದ್ದವು. ತಂದೆ ಇದರ ಬಗ್ಗೆ ಏನೂ ತಲೆ ಕೆಡಿಸಿ ಕೊಂಡಿರಲಿಲ್ಲ.

Bạn đang đọc truyện trên: Truyen247.Pro