ಭಾಗ ೨ - ಕಚೇರಿಯಲ್ಲೇನಿದೆ?
ಈತನ ಅಳಲನ್ನು ಕೇಳಿಯೂ ಕೇಳದೆ ಸುಮ್ಮನಿರುವಂತಿದೆ ಆ ದೇವ. ಹೌದು ನಿಮ್ಮ ಊಹೆಯು ನಿಜವಾಯ್ತು. ಮೂರನೆಯ ಮಗುವು ಕೂಡ ಹೆಣ್ಣಾಯ್ತು. ಈ ವಿಷಯವನ್ನು ಕೇಳಿದ ಜೆರಾಲ್ಡ್ಗೆ ಆಗಸವೇ ಬಂದು ತಲೆಗೆ ಬಿದ್ದಂತಾಯ್ತು.ಬಾಣಂತಿಯೊಂದಿಗೆ ಕೋಪಗೊಂಡು ತನ್ನ ಕಚೇರಿಯತ್ತ ಕಾಲ್ಕಿತ್ತ. ಹಸೀನಾಳಿಗೆ ತಡೆದುಕೊಳ್ಳಲಾರದಷ್ಟು ದುಃಖ ಉಕ್ಕಿಬಂತು , ತನ್ನ ಗಂಡ ಬಯಸಿದ್ದ ಒಂದು ಗಂಡು ಮಗುವನ್ನು ಕೊಡಲಾರಳಾದೇನೆ ಎಂದು ಪರಿತಪಿಸುತ್ತ ಗೊಳೋ ಎಂದು ಅತ್ತಳು.
ಜೆರಾಲ್ಡ್ನ ಹಾವ ಭಾವ ದಲ್ಲಿ ತುಂಬಾ ಬದಲಾವಣೆಗಳು ಕಂಡು ಬಂದವು. ಪ್ರತಿಯೊಂದು ಕ್ಷಣವೂ ಹೆಂಡತಿಯನ್ನು ಹೀಯಾಳಿಸತೊಡಗಿದನು. ಆದರೂ ಹಸೀನಾ ಸಹಿಸಿಕೊಂಡಳು. ಎರಡು ವರುಷಗಳ ಕಾಲ ಇದೆ ರೀತಿ ಮುಂದುವರೆಯಿತು ,ಕೊನೆಗೆ ತಾನೇ ಶಾಂತನಾಗಿಬಿಟ್ಟ. ತನ್ನ ಮಡದಿಯೊಡನೆ ಕೋಪ ತಣ್ಣಗಾಗುತ್ತಿರುವಾಗಲೇ ತನ್ನ ಮೂರು ಹೆಣ್ಣು ಮಕ್ಕಳ ಮೇಲೆ ಕೋಪವು ಹೆಚ್ಚಲಾರಂಭಿಸಿತು.
ಮಕ್ಕಳು ನೋಡು ನೋಡುತ್ತಿದ್ದಂತೆ ದೊಡ್ಡವರಾಗುತ್ತಿದ್ದರು. ಕೊನೆಯ ಮಗಳ ಹೆಸರನ್ನು ರೀನಾ ಎಂದಿಟ್ಟಿದ್ದರು. ಮಕ್ಕಳಿಗೆ ವಿದ್ಯಾಭ್ಯಾಸ ಜೋರಾಗಿಯೇ ನಡೆಯುತಿತ್ತು.ರೇಷ್ಮಾಳನ್ನು MBA ಮಾಡಿಸಬೇಕೆಂದು ಜೆರಾಲ್ಡ್ ಹಂಬಲಿಸುತಿದ್ದನು. ದಿನಗಳುರುಳುತಿದ್ದಂತೆಯೇ ದೊಡ್ಡ ಮಗಳು ಬೆಳೆದು ತನ್ನ ಹತ್ತನೇ ತರಗತಿಯನ್ನು ಪೂರ್ಣಗೊಳಿಸಿದಳು.
ಮೂರು ಮಕ್ಕಳು ಕೂಡ ಪ್ರತ್ಯಷ್ಟಿತ ಶಾಲೆಯಲ್ಲಿ ಓದುತ್ತಿದ್ದರು. ರೇಷ್ಮಾಳ ಆಸೆಯು ಫ್ಯಾಷನ್ ಡಿಸೈನಿಂಗ್ ನಲ್ಲಿ ಪದವಿಯನ್ನು ಪಡೆಯುವುದು, ಆದರೆ ಆಕೆಯನ್ನು ಬಿಸಿನೆಸ್ ಮ್ಯಾನೇಜ್ಮೆಂಟ್ ಪದವೀಧರೆಯನ್ನಾಗಿ ಮಾಡುವುದು ತಂದೆಯ ಆಶಯವಾಗಿತ್ತು.ರೀಮಾ ಇನ್ನೂ ೯ ನೇ ತರಗತಿಯಲ್ಲಿ ಓದುತ್ತಿದ್ದಳು. ರೀನಾ ೭ ನೇ ತರಗತಿಯಲ್ಲಿ ತನ್ನ ವ್ಯಾಸಂಗ ಮಾಡುತಿದ್ದಳು.
ರೀಮಾ ತುಂಬಾ ಹಠವಾದಿ , ತನಗೇನು ಬೇಕೋ ಅದನ್ನು ಪಡೆದೆ ಉಸಿರಾಡುವಳು, ಆಕೆಗೆ ತನ್ನ ತಂದೆಯ ಮೇಲೆ ಎಳ್ಳಷ್ಟೂ ಪ್ರೀತಿಯಿಲ್ಲ, ಆದರೆ ಅದಕ್ಕೆ ತದ್ವಿರುದ್ಧವಾಗಿ ರೀಮಾ ಇದ್ದಳು . ಆಕೆಗೆ ತಂದೆಯೆಂದರೆ ಬಲು ಇಷ್ಟ, ತಂದೆಯ ಮಾತನ್ನು ಮೀರಿ ನಡೆಯುವವಳಲ್ಲ . ಆದರೆ ಕೊನೆಯವಳಾದ ರೀನಾಳಿಗೆ ತನ್ನ ದೊಡ್ಡಕ್ಕ ಎಂದರೆ ಪಂಚ ಪ್ರಾಣ. ರೀನಾ ತುಂಬಾ ಜಾಣೆ , ಮದ್ದು ಬಲ್ಲವನಿಗೆ ರೋಗ ಬರುತ್ತೆ ಆದರೆ ಮಾತು ಬಲ್ಲವನಿಗೆ ದಾರಿ ಹಲವಾರುಗಳಿವೆ.ಇಂತಹ ವರ್ಗದ ಜನರ ಗುಂಪಿಗೆ ಸೇರುವವಳು ಈ ರೀನಾ. ೧೩ ವರುಷವಾದರೂ ತಂದೆಯನ್ನು ಹೇಗೆ ಪುಸಲಾಯಿಸಬೇಕೆಂದು ಚೆನ್ನಾಗಿ ಅರಿತು ಕೊಂಡವಳು ಈಕೆ. ಅರ್ಜುನನ ಬಾಣದ ತೀಕ್ಷ್ಣತೆ ಎಷ್ಟು ಬಿರುಸಾಗಿರುತ್ತೋ ಅಷ್ಟೇ ಬಿರುಸಾಗಿ ಮಾತನಾಡುವಳು ಈ ಪೋರಿ.
ದಿನಗಳುರುಳುತ್ತಿದ್ದಂತೆಯೇ ರೇಶ್ಮಾಳು ತನ್ನ ಸೀನಿಯರ್ ಸೆಕೆಂಡರಿ ಮುಗಿಸಿ ಫ್ಯಾಷನ್ ಡಿಸೈನಿಂಗ್ ಮಾಡಬೇಕೆಂಬ ಕನಸನ್ನು ಹೊತ್ತಿದ್ದಳು.ಇದರ ನಡುವೆಯೇ ರೀಮಾ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣಳಾಗಿ ಎಲ್ಲರ ಮನ ಸೆಳೆದಳು.
ಮನೆಯಲ್ಲಿ ಬಹಳಷ್ಟು ಆಳುಗಳಿದ್ದರಿಂದ ಮಕ್ಕಳಿಗೆ ಏನು ತೊಂದರೆಯಾಗುತ್ತಿರಲಿಲ್ಲ. ಕಷ್ಟ ಎಂಬುದು ಏನೆಂದು ತಿಳಿದಿರಲಿಲ್ಲ .ಹೀಗಾಗಿ ಒಂದು ದಿನ ರೇಷ್ಮಾ ತನ್ನ ಮುಂದಿನ ಶಿಕ್ಷಣದ ಬಗ್ಗೆ ವಿಚಾರಿಸಲು ತಂದೆಯ ಕಚೇರಿಗೆ ತೆರಳಿದಳು. ತನ್ನ ಬರುವಿಕೆಯನ್ನು ಆಕೆ ತಂದೆಗೆ ತಿಳಿಸಲೇ ಇಲ್ಲ, ಮನೆಯ ಕಾರು ಚಾಲಕನಿಗೆ ರೇಷ್ಮಾ ಆದೇಶವನ್ನಿತ್ತಳು, ಆಕೆಯ ಆದೇಶದಂತೆ ಕಾರು ಚಾಲಕ ಆಕೆಯನ್ನು ಕಚೇರಿಯ ಮುಂದೆ ತಂದು ನಿಲ್ಲಿಸಿದ. ಇದೆ ಮೊದಲ ಬಾರಿಗೆ ಆಕೆ ತಂದೆಯ ಕಚೇರಿಗೆ ಪ್ರವೇಶಿಸುತ್ತಿರುವುದು. ಈಕೆಯ ಬರುವಿಕೆ ತಂದೆಗೆ ಇನ್ನೂ ತಿಳಿದಿರಲಿಲ್ಲ.
ತಂದೆಯ ಕಚೇರಿಯೊಳಗೆ ನಾಕ್ ಮಾಡದೇನೆ ಒಳ ನಡೆದಳು.ಇದೇಆಕೆ ಮಾಡಿದ ಮೊದಲ ತಪ್ಪು. ತಂದೆಯ ಕೋಣೆಯೊಳಗೆ ಪ್ರವೇಶಿಸುತ್ತಲೇ ತನ್ನೆದುರು ಏನಾಗುತ್ತಿದೆಂಬುದನ್ನು ನೋಡಿ ಆಕೆ ದಿಗ್ಬ್ರಾಂತಳಾದಳು. ತಾನು ಏನು ನೋಡುತ್ತಿರುವೆ ಎಂದು ತನ್ನ ಕಣ್ಣುಗಳೇ ನಂಬಲಾರಲಾದವು.ಮಯ್ಯಲ್ಲಿ ಸೀಮೆ ಎಣ್ಣೆ ಸುರಿದು ಬೆಂಕಿ ಕೊಟ್ಟ ರೀತಿ ಭಾಸವಾಯಿತು." ಅಯ್ಯೋ ದೇವರೇ" ಎಂದೆನ್ನುತ್ತಾ ಧಡಾರನೆ ಕೆಳಕ್ಕುರುಳಿದಳು.
Bạn đang đọc truyện trên: Truyen247.Pro